
25th March 2025
ಮಲ್ಲಮ್ಮ ನುಡಿ ವಾರ್ತೆ
ಭಾಲ್ಕಿ: ಸುಸಂಸ್ಕೃತ ಸಮಾಜ ನಿರ್ಮಾಣ ಇಂದಿನ ಅಗತ್ಯವಾಗಿದ್ದು, ಇದರ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು ಎಂದು ಶಾಂತಿವರ್ಧಕ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಅಂಕುಶ ಢೋಲೆ ಹೇಳಿದರು.
ಪಟ್ಟಣದ ಶಾಂತಿವರ್ಧಕ ಬಿ.ಇಡಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಪ್ರಥಮ ವರ್ಷದ ಪ್ರಶಿಕ್ಷಣಾರ್ಥಿಗಳ ಸ್ವಾಗತ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಸ್ತುತ ಸಮಯದಲ್ಲಿ ಅತ್ಯುತ್ತಮ ಶಿಕ್ಷಕರ ಕೊರತೆ ಇದ್ದು, ಪ್ರಶಿಕ್ಷಣಾರ್ಥಿಗಳು ಅತ್ಯುತ್ತಮ ಶಿಕ್ಷಕರಾಗುವತ್ತ ಪರಿಶ್ರಮ ವಹಿಸಬೇಕು.
ಪ್ರಶಿಕ್ಷಣಾರ್ಥಿಗಳ ಶೈಕ್ಷಣಿಕ ಏಳಿಗೆಗೆ ಸಂಸ್ಥೆ ಸದಾ ಬೆನ್ನೆಲುಬಾಗಿ ಕಾರ್ಯ ನಿರ್ವಹಿಸುತ್ತದೆ ಎಂದು ತಿಳಿಸಿದರು.
ಸಿ. ಬಿ. ಪದವಿ ಕಾಲೇಜಿನ ಪ್ರಾಚಾರ್ಯ
ರಮೇಶ ಪಾಟೀಲ ಮಾತನಾಡಿ, ಶಿಕ್ಷಣ ಯಾರಿಗೂ ತಾರತಮ್ಯ ಮಾಡುವುದಿಲ್ಲ, ಹಾಗಾಗಿ, ಶಿಕ್ಷಣದ ಜ್ಞಾನ ಗ್ರಹಿಸಿದಾಗ ಮಾತ್ರ ಉತ್ತಮ ಶಿಕ್ಷಕರಾಗಿ, ಅತ್ಯುತ್ತಮ ಸಮಾಜ ಕಟ್ಟಲು ಸಾಧ್ಯ. ಕಲಿಯುವ ವಿದ್ಯಾರ್ಥಿಗಿಂತ ಕಲಿಸುವ ಶಿಕ್ಷಕರಿಗೆ ಹೆಚ್ಚು ಆಸಕ್ತಿ ಇದ್ದಾಗ ಮಾತ್ರ ಶಿಕ್ಷಕರ ಕೀರ್ತಿ ಹೆಚ್ಚುತ್ತದೆ ಎಂದರು.
ಪಿ.ಜಿ. ಕಾಲೇಜಿನ ಪ್ರಾಚಾರ್ಯೆ ಮೀನಾಕುಮಾರಿ ಪಾಟೀಲ, ಪ್ರಾಚಾರ್ಯರಾದ ಪರಮೇಶ್ವರ್ ಎನ್. ಮಾಲಿ ಪಾಟೀಲ, ಲಕ್ಷ್ಮೀಕಾಂತ್ ನಾಟೆಕರ್, ಸುವರ್ಣಾ, ಬಸಲಿಂಗಪ್ಪಾ, ಆನಂದ ಜೇವೂರ್ ಸೇರಿದಂತೆ ಇತರರು ಇದ್ದರು.
ಕಲಬುರಗಿ:- ನಗರದ ಜಿಲ್ಲಾ ಪಂಚಾಯತ ಅವರಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆ ವತಿಯಿಂದ ಜಿಲ್ಲೆಯ ಭೂಪಾಲ ತೆಗನೂರ ಗ್ರಾಮ ಪಂಚಾಯತ ಅಭಿವದ್ಧಿ ಅಧಿಕಾರಿಯನ್ನು ಕೂಡಲೆ ಕೆಲಸದಿಂದ ವಜಾಗೊಳಿಸವ ಬಗ್ಗೆ ಜಿಲ್ಲಾ ಅಧ್ಯಕ್ಷರಾದ ಅಣವಿರಪ್ಪ ಎಸ್. ಹೆಬ್ಬಾಳ ಅವರ ಸಮುಖದಲ್ಲಿ ಮನವಿ ಪತ್ರ ಸಲ್ಲಿಸಿದ್ದರು .
ಬೊಮ್ಮಗೊಂಡೇಶ್ವರ ಉತ್ಸವದಲ್ಲಿ ಡಾ. ಶೈಲೇಂದ್ರ ಬೆಲ್ದಾಳೆ ಹೇಳಿಕೆ ಬೊಮ್ಮಗೊಂಡೇಶ್ವರ ತತ್ವಗಳ ಪ್ರಚಾರ ಆಗಲಿ